ಮಂಗಳೂರು: ನಗರದ ಪುರಭವನದಲ್ಲಿ (ಟೌನ್ ಹಾಲ್) ನಲ್ಲಿ ತೆಕ್ಕಿಲ್ ಪ್ರತಿಷ್ಠಾನ ಅಧೀನದಲ್ಲಿ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನಮಾನ) ಕರ್ನಾಟಕ ಸರ್ಕಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ನೂತನ ವೆಬ್‌ಸೈಟ್ ‘ತೆಕ್ಕಿಲ್ ಮೀಡಿಯಾ’ವನ್ನು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು. ಲೋಕಾರ್ಪಣೆಗೊಳಿಸಿ ಮಾತನಾಡಿದ ಐವನ್ ಡಿಸೋಜ ಅವರು ಸಾಮಾಜಿಕ ಜಾಲತಾಣ ಈಗಿನ ಕಾಲದಲ್ಲಿ ಬಹಳಷ್ಟು ಅವಶ್ಯಕತೆ ಇದೆ, ವೇಗವಾಗಿ ಸುದ್ದಿ, ಮಾಹಿತಿಯನ್ನು ಒಂದು ಬೆರಳಂಚಿನಲ್ಲಿ ತಿಳಿಯಲು ಇಂತಹ ವೆಬ್ಸೈಟ್ ಅತ್ಯವಶ್ಯಕ, ಹಾಗೇ ಅದರ ಒಳಿತು ಕೆಡುಕು ಗಳನ್ನು ತಿಳಿಸಿ ವೆಬ್ಸೈಟ್’ಗೆ ಶುಭಹಾರೈಸಿದರು.
‘ತೆಕ್ಕಿಲ್ ಮೀಡಿಯಾ.ಇನ್’ ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ವೈಯಕ್ತಿಕ ಪರಿಚಯ, ಸಾಮಾಜಿಕ ಸೇವೆ ಹಾಗೂ ಆಡಳಿತ ಕ್ಷೇತ್ರದ ಕುರಿತ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಅವರ ಅಧಿಕೃತ ವೆಬ್‌ಸೈಟ್ ಆಗಿದೆ.
ಕಾರ್ಯಕ್ರಮದಲ್ಲಿ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫಾ, ಕಿರಣ್ ಬುಡ್ಲೆಗುತ್ತು, ಸಂಶುದ್ದೀನ್ ಎಸ್.ಎ, ಪಿ.ಎ. ಮುಹಮ್ಮದ್, ಅಡ್ವಕೇಟ್ ಆದಿಲ್ ಅಲಿ, ಶೆಝಿನ್ ತೆಕ್ಕಿಲ್ ಉಪಸ್ಥಿತರಿದ್ದರು.

Leave a Reply