ಮಂಗಳೂರಿನ ತಾಜ್ ವಿವಾಂತದಲ್ಲಿ ಗಣ್ಯರ ಸ್ನೇಹಕೂಟ: ಸಲೀಂ ಅಹ್ಮದ್ ಅವರಿಗೆ ಸನ್ಮಾನ

ಮಂಗಳೂರು: ನಗರದ ತಾಜ್ ವಿವಾಂತ (Taj Vivanta) ಹೋಟೆಲ್‌ನಲ್ಲಿ ಗಣ್ಯರ ವಿಶೇಷ ಸ್ನೇಹಕೂಟ (Get-together) ಕಾರ್ಯಕ್ರಮವು ನ.23 ರಂದು ಅತ್ಯಂತ ಸಂಭ್ರಮದಿಂದ ಜರುಗಿತು.
ಈ ಕಾರ್ಯಕ್ರಮದಲ್ಲಿ ಪ್ರಮುಖ ಗಣ್ಯರಾದ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್, ಆಂದ್ರಪ್ರದೇಶ್ ಎಐಸಿಸಿ ಉಸ್ತುವಾರಿ ಪಿ.ವಿ ಮೋಹನ್, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನ ಮಾನ) ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಾಹೀದ್ ತೆಕ್ಕಿಲ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಎಜೆ ಆಸ್ಪತ್ರೆ ಹಾಗೂ ರೀಸರ್ಚ್ ಸೆಂಟರ್ ಅಧ್ಯಕ್ಷ ಎಜೆ ಶೆಟ್ಟಿ, ಯೆನೆಪೋಯ ಸಂಸ್ಥೆಗಳ ಡೈರೆಕ್ಟರ್ ಜಾವೆದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸಲೀಂ ಅಹ್ಮದ್ ಅವರಿಗೆ ಗಣ್ಯರ ಸಮ್ಮುಖದಲ್ಲಿ ಟಿ.ಎಂ ಶಾಹೀದ್ ತೆಕ್ಕಿಲ್ ನೇತೃತ್ವದಲ್ಲಿ ಆತ್ಮೀಯವಾಗಿ ಸನ್ಮಾನ ನೆರವೇರಿಸಲಾಯಿತು. ಮುಂದೆ ಇತರ ಸಂಘ ಸಂಸ್ಥೆಗಳಿಂದ ಗೌರವ ಸನ್ಮಾನ ನಡೆಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳು ಮಾತನಾಡಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಹಾಗೂ ಪರಸ್ಪರ ಶುಭಕೋರಿದರು. ಕಾರ್ಯಕ್ರಮವನ್ನು ಖಾಲಿದ್ ಉಜಿರೆ ನಿರೂಸಿದರು. ಕೊನೆಯಲ್ಲಿ ಚಹಾ ಕೂಟವನ್ನು ಏರ್ಪಡಿಸಲಾಗಿತ್ತು.

Comments

Leave a Reply

Your email address will not be published. Required fields are marked *