ರಾಣೆಬೆನ್ನೂರು ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ‘ಸಂಘಟನಾ ಸೃಜನ ಅಭಿಯಾನ – 2’ ಸಭೆ, ತಳಮಟ್ಟದಿಂದ ಪಕ್ಷ ಕಟ್ಟುವುದು ನಮ್ಮೆಲ್ಲರ ಜವಬ್ದಾರಿ: ಟಿ.ಎಂ ಶಾಹೀದ್ ತೆಕ್ಕಿಲ್

ಹಾವೇರಿ ಜಿಲ್ಲೆ: ಸಂಘಟನಾ ಸೃಜನ್ ಅಭಿಯಾನ್–2 ಎಂಬುದು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಪುನರ್‌ನಿರ್ಮಿಸಲು ಮತ್ತು ಬಲಪಡಿಸಲು ಕೆಪಿಸಿಸಿ (KPCC) ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಮಹತ್ವದ ಸಂಘಟನಾತ್ಮಕ ಕಾರ್ಯಕ್ರಮವಾಗಿದೆ. ಇದರಲ್ಲಿ ಬೂತ್, ಮಂಡಲ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಗಳನ್ನು ಪುನರ್‌ರಚಿಸುವ ಮೂಲಕ ಸ್ಥಳೀಯ ಮಟ್ಟದಲ್ಲಿ ಪಕ್ಷದ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಬ್ಲಾಕ್‌ಗೂ ಒಬ್ಬರನ್ನು ನೇಮಕ ಮಾಡಲಾಗಿದ್ದ ಬಿ.ಕೆ ಹರಿಪ್ರಸಾದ್ ಇವರ ನಿರ್ದೇಶನದಂತೆ ರಾಣೆಬೆನ್ನೂರು ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ  ‘ಸಂಘಟನಾ ಸೃಜನ ಅಭಿಯಾನ – 2’ ಸಭೆಯು ನ. 25 ರಂದು ನಗರದ ಶ್ರೀ ಕೆ.ಬಿ‌ ಕೋಳಿವಾಡ ಸಭಾಂಗಣದಲ್ಲಿ ನಡೆಯಿತು.


ಸಭೆಯಲ್ಲಿ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನಮಾನ) ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಮಹತ್ವ ಹಾಗೂ ‘ಸಂಘಟನಾ ಸೃಜನ ಅಭಿಯಾನ’ದ ರೂಪುರೇಷೆಗಳ ಕುರಿತು ಮುಖಂಡರಿಗೆ ವಿವರವಾಗಿ ಮಾರ್ಗದರ್ಶನ ನೀಡಿದರು. ಕಾರ್ಯಕರ್ತರೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಪಕ್ಷದ ಸಿದ್ಧಾಂತ ಹಾಗೂ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸಬೇಕು ಎಂದು ಕರೆ ನೀಡಿದರು.
ಈ ಸಂಘಟನಾ ಸಭೆಯಲ್ಲಿ ಸಂಜೀವ ಕುಮಾರ,
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್, ಬಸನಗೌಡ ಮರದ, ಕೃಷ್ಣಪ್ಪ ಎಂ. ಕಂಬಳಿ, ನೀಲಕಂಠಪ್ಪ ಕುಸಗೂರು, ಎಸ್.ಆರ್. ಬಾರ್ಕಿ, ಎಂ.ಎಚ್. ಪಾಟೀಲ್, ಶೇರುಖಾನ್ ಕಾಬಲಿ, ಅಂಬ್ಲಿ ಸಿದ್ದಣ್ಣ, ಶಂಕರ್ ಮೆಹರ್ವಾಡೆ, ಬಸವರಾಜ್ ಬಿ. ತಳವಾರ್, ರತ್ನ ಪೂನಿತ್ ಹಾಗೂ ರಾಣೆಬೆನ್ನೂರು ನಗರ ಹಾಗೂ ಗ್ರಾಮೀಣ ಬ್ಲಾಕ್‌ನ ಇತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *