ಹಾವೇರಿ ಜಿಲ್ಲೆ / ರಾಣೆಬೆನ್ನೂರು: ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ತಾಲೂಕು ಆಡಳಿತ ಸೌಧಕ್ಕೆ ನ.25 ರಂದು ಕರ್ನಾಟಕ ಸರಕಾರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನಮಾನ) ಟಿ.ಎಂ ಶಾಹೀದ್ ತೆಕ್ಕಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೇಟಿಯ ವೇಳೆ ಕಾರ್ಮಿಕರ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿ ಹಾಗೂ ಸಂಬಂಧಿತ ಸೌಲಭ್ಯಗಳ ಅನುಷ್ಠಾನದ ಕುರಿತು ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಕಾರ್ಮಿಕರ ಹಿತರಕ್ಷಣೆ ಮತ್ತು ಕನಿಷ್ಠ ವೇತನ ಕಾಯ್ದೆಯ ಸಮರ್ಪಕ ಜಾರಿಗೆ ಗಮನಹರಿಸುವಂತೆ ಸಂಬಂಧಪಟ್ಟವರಿಗೆ ತಿಳಿಸಿದರು.

ಮಾನ್ಯ ತಹಶಿಲ್ದಾರರು ಅರುಣ್ ಕುಮಾರ್ ಕಾರಗಿ, ಶಿಕ್ಷಣ ಇಲಾಖೆ ಅಧಿಕಾರಿ ಎಸ್.ಎಸ್ ಅಡಿಗ, ನಗರಸಭೆ ರಾಣಿಬೆನ್ನೂರು ಅಧಿಕಾರಿ ಮಹೇಶ್ ಕೂಡರ್,
ಪೋಲಿಸ್ ಅಧಿಕಾರಿ ಪ್ರಕಾಶ ಕಟಗಿ, ಕಾರ್ಮಿಕ ಇಲಾಖೆ ಅಧಿಕಾರಿ ದೇವೇಂದ್ರ ಗಂಟೀಕಾರ, ಎಎಸ್ಐ ಬಿ.ಎಸ್ ಮಡ್ಕೆರ್, ವಸಂತ ಕುಮಾರ್ ಎಚ್.ಎ. ಪ್ರಧಾನ ಕಾರ್ಯದರ್ಶಿ, ಸಿಂಥೈಟ್ ಎಂಪ್ಲಾಯೀಸ್ ಯೂನಿಯನ್, ಕುಮಾರಪಟ್ಟಣ, ಸಿಂಜೆಂಟಾ ಇಂಡಿಯಾ ಪ್ರೈ.ಲಿ. — ಅಸುಂಡಿ–ಕಜ್ಜರಿ ರಸ್ತೆ, ಅಸುಂಡಿ, ರಾಣೇಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ, ಮಹಾಂತೇಶ ಪಾಟೀಲ್ ಹಿರಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕರು, ಗ್ರೀನ್‌ಎನರ್ಜಿ ಬಯೋ ರಿಫೈನರೀಸ್ ಪ್ರೈ.ಲಿ., ಹನುಮನಹಳ್ಳಿ, ರಾಣೇಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ, ಅರುಣ್‌ಕುಮಾರ್ ಡಿ. — ಮಾನವ ಸಂಪನ್ಮೂಲ ವ್ಯವಸ್ಥಾಪಕರು , ಸಿಂಥೈಟ್ ಇಂಡಸ್ಟ್ರೀಸ್ ಲಿಮಿಟೆಡ್, ಕಾವಲೆತ್ತು (ದಾವೆತ್ತು) ಗ್ರಾಮ, ರಾಣೇಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ, ರವಿಪ್ರಸಾದ್ ಎಂ. — ಮಾನವ ಸಂಪನ್ಮೂಲ ವೆಂಕಟೇಶ್ವರ ಹ್ಯಾಚರೀಸ್ ಪ್ರೈ.ಲಿ., ತೆರದಹಳ್ಳಿ, ರಾಣೇಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ, ವೆಂಕಟೇಶ್ವರ ಹ್ಯಾಚರೀಸ್ ಪ್ರೈ.ಲಿ. (ಫುಡ್ಸ್ ವಿಭಾಗ) / ಚಿಕನ್ ಪ್ರೊಸೆಸಿಂಗ್, ರಾಣೇಬೆನ್ನೂರು ಗೋಲ್ಡನ್ ಹ್ಯಾಚರೀಸ್ ಪ್ರೈ.ಲಿ. ವಿವಿಧ ಅಧಿಕಾರಿಗಳು ಹಾಗೂ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.


Leave a Reply