ದಕ ಜಿಲ್ಲೆ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ-ಪೇರಡ್ಕ ಮುಹಿದ್ಧೀನ್ ಜುಮಾಮಸೀದಿಯ ನವೀಕರಣಕ್ಕೆ ರೂ. 5 ಲಕ್ಷ, ತೆಕ್ಕಿಲ್ ಮೊಹಮದ್ ಹಾಜಿ ಮೆಮೋರಿಯಲ್ ತಖ್ವಿಯತ್ತುಲ್ ಇಸ್ಲಾಂ ಮದರಸ ಪೇರಡ್ಕ ಇದರ ದುರಸ್ತಿ ಕಾರ್ಯಕ್ಕೆ ರೂ. 5 ಲಕ್ಷ ಹಾಗೂ ಅರಂತೋಡು ಬದ್ರಿಯಾ ಜುಮಾ ಮಸೀದಿಯ ನವೀಕರಣಕ್ಕೆ ರೂ. 5 ಲಕ್ಷ ಮತ್ತು ನುಸ್ರತುಲ್ ಇಸ್ಲಾಂ ಮದರಸ ಕಟ್ಟಡ ಕಾಮಗಾರಿಗೆ ರೂ. 5 ಲಕ್ಷ, ಒಟ್ಟು 20 ಲಕ್ಷ ರೂಪಾಯಿ ವಕ್ಫ್ ಅನುದಾನವು ಮಂಜೂರುಗೊಂಡಿರುತ್ತದೆ. ಈ ಅನುದಾನ ಮಂಜೂರತಿಗೆ ಕರ್ನಾಟಕ ಸರಕಾರದ ಕನಿಷ್ಟ ವೇತನ ಸಲಹಾ ಮಂಡಳಿ ಸಚಿವ ದರ್ಜೆ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ರವರ ಶಿಪಾರಸ್ಸಿನ ಮೇರೆಗೆ ಕರ್ನಾಟಕ ಸರಕಾರದ ವಕ್ಫ್ ಮತ್ತು ದ .ಕ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ರವರು ಮಂಜೂರು ಗೊಳಿಸಿರುತ್ತಾರೆ. ಪೇರಡ್ಕ ಗೂನಡ್ಕ ಮಸೀದಿ ಅಧ್ಯಕ್ಷರಾದ ಪಿ ಕೆ ಉಮ್ಮರ್ ಹಾಗೂ ಅರಂತೋಡು ಮಸೀದಿಯ ಅಧ್ಯಕ್ಷರಾದ ಅಶ್ರಫ್ ಗುಂಡಿ ಅಭಿನಂದನೆ ಸಲ್ಲಿಸಿದ್ದಾರೆ.
ಸಂಪಾಜೆ ಪೇರಡ್ಕ ಮತ್ತು ಅರಂತೋಡು ಮಸೀದಿ ಹಾಗು ಮದರಸ ಕಟ್ಟಡ ಕಾಮಗಾರಿಗೆ ವಕ್ಫ್ ಇಲಾಖೆಯಿಂದ ರೂ. 20 ಲಕ್ಷ ಅನುದಾನ ಮಂಜೂರು

Leave a Reply