ವಿಧಾನಸೌಧದ ಆವರಣದಲ್ಲಿ ಕನಕದಾಸರ ಪ್ರತಿಮೆಗೆ ಟಿ.ಎಂ. ಶಾಹಿದ್ ತೆಕ್ಕಿಲ್ ಪುಷ್ಪ ನಮನ

ಬೆಂಗಳೂರು, ನವೆಂಬರ್ 27: ನಾಡಿನ ಶ್ರೇಷ್ಠ ಸಂತ, ದಾರ್ಶನಿಕ ಹಾಗೂ ಸಮಾಜ ಸುಧಾರಕ ಕನಕದಾಸರ ಜಯಂತಿಯ ಅಂಗವಾಗಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ (ಸಚಿವ ಸ್ಥಾನಮಾನ) ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಇಂದು ವಿಧಾನಸೌಧದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಕನಕದಾಸರ ಕಿರು ಪರಿಚಯ: 16ನೇ ಶತಮಾನದ ಪ್ರಮುಖ ಹರಿದಾಸರು, ಕವಿ ಮತ್ತು ತತ್ವಜ್ಞಾನಿಗಳಾದ ಕನಕದಾಸರು ಕರ್ನಾಟಕದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಗೆ ಅಪಾರ ಕೊಡುಗೆ ನೀಡಿದ್ದಾರೆ. ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದ ಇವರ ಮೂಲ ಹೆಸರು ತಿಮ್ಮಪ್ಪ ನಾಯಕ. ತಮ್ಮ ಕೀರ್ತನೆಗಳು, ಉಗಾಭೋಗಗಳು ಹಾಗೂ ‘ಮೋಹನತರಂಗಿಣಿ’, ‘ನಳಚರಿತ್ರೆ’, ‘ರಾಮಧಾನ್ಯ ಚರಿತೆ’ ಮತ್ತು ‘ಹರಿಭಕ್ತಿಸಾರ’ದಂತಹ ಶ್ರೇಷ್ಠ ಕೃತಿಗಳ ಮೂಲಕ ಸಮಾಜದಲ್ಲಿದ್ದ ಜಾತಿ ವ್ಯವಸ್ಥೆ ಹಾಗೂ ಅಸಮಾನತೆಯನ್ನು ಕಟುವಾಗಿ ವಿರೋಧಿಸಿದರು. “ಕುಲ ಕುಲ ಕುಲವೆಂದು ಹೊಡೆದಾಡದಿರಿ” ಎಂಬ ಇವರ ಸಂದೇಶವು ಇಂದಿಗೂ ಮಾನವೀಯ ಮೌಲ್ಯಗಳ ದಾರಿದೀಪವಾಗಿದೆ.

Comments

Leave a Reply

Your email address will not be published. Required fields are marked *